ಹನುಮಂತನ ನಲ್ವತ್ತು (ಕನ್ನಡದಲ್ಲಿ ಹನೂಮಾನ್ ಚಾಲೀಸ )- Hanuman Chalisa in Kannada

ಹನುಮಂತನ ನಲ್ವತ್ತು- ಕನ್ನಡದ ಹನೂಮಾನ್ ಚಾಲೀಸ
Hanuman Chalisa in Kannada

ಕನ್ನಡಕ್ಕೆ ಅನುವಾದ- ಡಾ॥ ಶ್ರೀಕಾಂತ್ ಕೃ. ಮೂರ್ತಿ
Verslation (translation in verse) by Dr Shrikaanth Krishnamurthy

ಮಮಗುರುಚರಣಕಮಲರಜದಿ 
ಮನಮಂದಿರ ತೊಳೆದಿನ್ನು
ವಿಮಲ ರಘುವರನ ಯಶವನ್ನು
ವಿವರಿಪೆನು ಫಲದವನ್ನು

mamagurucaraṇakamalarajadi
manamandira toḷedinnu
vimala raghuvarana yaśavannu
vivaripenu phaladavannu

ಬುದ್ಧಿಹೀನ ನಾನೆಂದರಿತು
ಪೊಗಳುವೆ ಪವನಜ ನಿನ್ನ
ಬುದ್ಧಿವಿದ್ಯೆ ಬಲ ನೀಡೆನಗೆ
ಪೋಗಿಸು ಬೇಗುದಿ ಬನ್ನ 

buddhihīna nānendaritu
pogaḷuve pavanaja ninna
buddhividye bala nīḍenage
pōgisu bēgudi banna


ಜಯ ಹನುಮಂತ ಜಾಣ ಗುಣವಂತ
ಜಯ ಕಪಿಸಂತ ತ್ರಿಜಗದ ಮುಂತ

jaya hanumanta jāṇa guṇavanta
jaya kapisanta trijagada munta

2
ರಾಮದೂತ ಅಸದಳ ಬಲಧಾಮ
ಭೀಮ ಪವನಸುತ ಅಂಜನೆಪ್ರೇಮ

rāmadūta asadaḷa baladhāma
bhīma pavanasuta an̄janeprēma

3
ವಿಮಲ ವೀರ ವಿಕ್ರಮ ವಜ್ರಾಂಗಿ
ಕುಮತಿನಿವಾರ ಸುಮತಿಗಳ ಸಂಗಿ

vimala vīra vikrama vajrāṅgi 
kumatinivāra sumatigaḷa saṅgi

4
ಹೊನ್ನಿನಮೈಯ ಒಡಲಲೊಳುಗೈಯ
ಚೆನ್ನಿಗ ಸುರುಳುಗುರುಳ ಹನುಮೈಯ

honninamaiya oḍalaloḷugaiya
cenniga suruḷuguruḷa hanumaiya

5
ಧ್ವಜವಜ್ರವ ಕರದಿ ಪಿಡಿದ ಧೀರ
ಭುಜದಿ ಹೊಳೆವ ಹುಲ್ಲಿನ ಜನಿವಾರ

dhvajavajrava karadi piḍida dhīra
bhujadi hoḷeva hullina janivāra

6
ರುದ್ರಾಂಶನೆ ಕೇಸರಿ ಮಗ ದೀರ
ಪದ್ರವಂದಿತ ಪರಾಕ್ರಮಿ ಶೂರ

rudrāṁśane kēsari maga dīra
padravandita parākrami śūra

7
ಎಲ್ಲವಬಲ್ಲವನೊಳ್ಳಿದ ಚದುರ
ಎಲ್ಲು ನೀ ರಾಮ ಕಾರ್ಯದಿ ವಿದುರ

ellavaballavanoḷḷida cadura
ellu nī rāma kāryadi vidura

8
ಒಡೆಯನ ಕತೆ ಕೇಳಲು ಕಿವಿಗೊಟ್ಟೆ
ಒಡೆಯ ಒಡತಿ ತಮ್ಮನನೆದೆಲಿಟ್ಟೆ

oḍeyana kate kēḷalu kivigoṭṭe
oḍeya oḍati rammananedeliṭṭe

9
ಗಿಡ್ಡರೂಪದಿಂ ಸೀತೆಯರಸಿದೆ
ದೊಡ್ಡರೂಪದಿಂ ಲಂಕೆಯುರಿಸಿದೆ

giḍḍarūpadiṁ sīteyaraside
doḍḍarūpadiṁ laṅkeyuriside

10
ಭೀಮನಾಗಿ ರಕ್ಕಸರನು ಕೊಂದೆ
ರಾಮಕಜ್ಜಕುಡಿಗಟ್ಟಿಯೆ ನಿಂದೆ

bhīmanāgi rakkasaranu konde
rāmakajjakuḍigaṭṭiye ninde

11
ತಮ್ಮನುಳಿಯೆ ಸಂಜೀವನಿ ತಂದೆ
ಪೆಮ್ಮನಪ್ಪಿ ಹರಸಲು ಬಳಿಸಂದೆ

tammanuḷiye san̄jīvani tande
pemmanappi harasalu baḷisande

12
ಹರಸಿ ಹೊಗಳುತಲಿ ನುಡಿದನು ಪೆಮ್ಮ
ಭರತನಂತೆ ನೀನೆಮ್ಮಯ ತಮ್ಮ

harasi hogaḷutali nuḍidanu pemma
bharatanante nīnemmaya tamma

13
ಸಾಸಿರಮೊಗ ನಿನ ಪಾಡಿದನೆಂದೇ
ಆ ಸಿರಿಪತಿ ಗಳಗೂಡಿದ ತಂದೆ

sāsiramoga nina pāḍidanendē
ā siripati gaḷagūḍida tande

14
ಅಜನೀಶ್ವರ ಸನಕಾದಿ ಹಿರಿಯರೂ
ಭುಜಗಪ ನಾರದ ವಾಣಿ ಸಿರಿಯರೂ

ajanīśvara sanakādi hiriyarū
bhujagapa nārada vāṇi siriyarū

15
ಜವ ಕುಬೇರ ದಿಕ್ಪಾಲರು ಜೊತೆಯಾ
ಕವಿಗಳು ಬಣ್ಣಿಸಲಾರರು ಕತೆಯ

java kubēra dikpālaru joteyā
kavigaḷu baṇṇisalāraru kateya

16
ರಮೆಗಂಡನ ಸಂಗಕೆ ಸೇರಿಸಿದೆ
ರುಮೆಗಂಡನ ಗದ್ದುಗೆಗೇರಿಸಿದೆ

ramegaṇḍana saṅgake sēriside
rumegaṇḍana gaddugegēriside

17
ನಿನ್ನ ಮಾತನೆ ವಿಭೀಷಣ ಕೇಳ್ದ
ಚಿನ್ನಭರಿತ ಲಂಕೆಯ ತಾನಾಳ್ದ

ninna mātane vibhīṣaṇa kēḷda
cinnabharita laṅkeya tānāḷda

18
ಬಹುಯೋಜನ ದೂರದಲಿಹ ಭಾನು
ಸಿಹಿ ಹಣ್ಣೆನ್ನುತ ನುಂಗಿದೆ ನೀನು

bahuyōjana dūradaliha bhānu
sihi haṇṇennuta nuṅgide nīnu

19
ಒಡೆಯನುಂಗುರವ ಕಚ್ಚಿಯೆ ನೀನು
ಕಡಲನು ದಾಟಿದುದಚ್ಚರಿಯೇನು

oḍeyanuṅgurava kacciye nīnu
kaḍalanu dāṭidudaccariyēnu

20
ಜಗದಲಿ ದುರ್ಗಮ ಕಜ್ಜಗಳಾವೂ
ಸುಗಮದಿ ನೀನೊಲಿದರೆಯಾದಾವು

jagadali durgama kajjagaḷāvū
sugamadi nīnolidareyādāvu

21
ರಾಮನ ಬಾಗಿಲ ಕಾಯುವ ಧೀರ
ನೀ ಮನವೊಲಿಯದೆ ಯಾವನು ತೂರ

rāmana bāgila kāyuva dhīra
nī manavoliyade yāvanu tūra 

22
ಈಯುವೆ ಶರಣೆಂದಗೆ ಸುಖವೆಲ್ಲಾ
ಕಾಯಲು ನೀನಿರೆ ಭಯವೇಯಿಲ್ಲ

īyuve śaraṇendage sukhavellā
kāyalu nīnire bhayavēyilla 

23
ತೇಜವ ತಡೆಯಲು ನೀನೇ ಸಯ್ಯೋ
ಮೂಜಗ ಥರಥರ ನಡುಗುವುದಯ್ಯೋ

tējava taḍeyalu nīnē sayyō
mūjaga tharathara naḍuguvudayyō 

24
ಭೂತಪಿಶಾಚಿಗಳೋಡಿದುವತ್ತ
ತಾತ ನಿನ್ನ ಹೆಸರನು ಕೇಳುತ್ತ

bhūtapiśācigaḷōḍiduvatta 
tāta ninna hesaranu kēḷutta

25
ರೋಗರುಜಿನಗಳು ಸರಿದವು ದೂರ
ಏಗಳು ಜಪಿಸಲು ನಿನ್ನಯ ಪೇರ

rōgarujinagaḷu saridavu dūra
ēgaḷu japisalu ninnaya pēra

26
ಕಡುಸಂಕಟ ಬಿಡಿಸುವೆ ಹನುಮ ಭಳಾ
ನುಡಿನಡೆ ಮನದಿಂ ಜಾನಿಪರುಗಳ

kaḍusaṅkaṭa biḍisuve hanuma bhaḷā
nuḍinaḍe manadiṁ jāniparugaḷa 

27
ಕಾಮನೆಗಳ ಪೂರೈಸುವ ರಾಜಾ-
ರಾಮನ ಕಜ್ಜವ ನೆರಪಿದ ಓಜ

kāmanegaḷa pūraisuva rājā-
rāmana kajjava nerapida ōja 

28
ಆವ ಮನೋರಥವನು ಬಯಸುವರೊ
ತಾವದ ಪಡೆದು ಸುಖಿಸಿ ಜಯಿಸುವರೊ

āva manōrathavanu bayasuvaro
tāvada paḍedu sukhisi jayisuvaro

29
ಯುಗಯುಗದಲಿ ನಿನ್ನಯ ಪ್ರತಾಪ
ಜಗತ್ಪ್ರಸಿದ್ಧವು ತೇಜೋರೂಪ

yugayugadali ninnaya pratāpa
jagatprasiddhavu tējōrūpa 

30
ಪ್ರೇಮದಿ ಸಾಧುಸಜ್ಜನರ ಕಾವೆ
ರಾಮಪ್ರಿಯ ನೀನಸುರರ ಸಾವೆ

prēmadi sādhusajjanara kāve
rāmapriya nīnasurara sāve

31
ಅಷ್ಟಸಿದ್ಧಿ ನವನಿಧಿ ನೀನೀಯೆ
ಇಷ್ಟದಿ ಹರಸಿದಳು ಸೀತೆ ತಾಯೆ

aṣṭasiddhi navanidhi nīnīye
iṣṭadi harasidaḷu sīte tāye

32
ರಾಮ ರಸಾಯನ ನಿನ್ನಲಿ ಉಂಟಾ
ಮಾಮಹಿಮಗೆ ನೀನೆಂದಿಗು ಬಂಟ

rāma rasāyana ninnali uṇṭā 
māmahimage nīnendigu baṇṭa

33
ನಿನ್ನ ಭಜಿಸುವಗೆ ರಾಮನು ಸಿಕ್ಕ
ಮುನ್ನ ಕರ್ಮಗಳು ಸರಿದವು ಪಕ್ಕ

ninna bhajisuvage rāmanu sikka
munna karmagaḷu saridavu pakka

34
ಇನ್ನವ ರಾಘವನೂರನೆ ಹೊಕ್ಕ
ಘನ್ನ ಹರಿಭಕುತನೆನಲವ ತಕ್ಕ

innava rāghavanūrane hokka
ghanna haribhakutanenalava takka 

35
ಬೇರೇ ದೇವರ ನೆನೆವುದೆ ಬೇಡ
ವೀರಹನುಮ ಸುಖತರುವನು ಕೂಡ

bērē dēvara nenevude bēḍa
vīrahanuma sukhataruvanu kūḍa

36
ಅಂಜನಿ ತನಯನ ನೆನೆವರಿಗೆಂದೂ
ಅಂಜಿಕೆ ಸಂಕಟ ಸೋಕವು ಬಂದು

an̄jani tanayana nenevarigendū
an̄jike saṅkaṭa sōkavu bandu

37
ಜಯಜಯಜಯ ಹನುಮನೆ ಬಲವಂತ
ದಯತೋರೆಲೊ ಗುರುಗಳಲಿ ಮಹಂತ

jayajayajaya hanumane balavanta
dayatōrelo gurugaḷali mahanta 

38
ನೂರುಸಲವಿದನು ಪಠಿಸುವರಾರೊ
ಪಾರುಗಂಡು ಸುಖಿಸುವರಿದ ಸಾರೊ

nūrusalavidanu paṭhisuvarāro
pārugaṇḍu sukhisuvarida sāro 

39
ಈ ನಲವತ್ತನ್ನೋದಿದರೋತು
ಏನೂ ಸಿದ್ಧಿಪುದಜ ಋಜುವಾತು

ī nalavattannōdidarōtu
ēnū siddhipudaja r̥juvātu

40
ತುಳಸಿದಾಸ ಸಿರಿಕಾಂತನ ಚೇಲ
ಒಳಗೋತಿರೆ ಬೇಡುವನನುಗಾಲ

tuḷasidāsa sirikāntana cēla
oḷagōtire bēḍuvananugāla

ಮರುತಸುತನೆ ಸಂಕಟಹರಣ
ಮಂಗಳಮೂರುತಿ ರೂಪ
ನಿರುತ ಪತಿಸತಿಯನುಜಶರಣ
ನೆಲೆಸೆನ್ನೊಳು ಸುರಭೂಪ

marutasutane saṅkaṭaharaṇa
maṅgaḷamūruti rūpa
niruta patisatiyanujaśaraṇa
nelesennoḷu surabhūpa

ಕನ್ನಡಕ್ಕೆ ಅನುವಾದ- ಡಾ॥ ಶ್ರೀಕಾಂತ್ ಕೃ. ಮೂರ್ತಿ

Published by Shrikaanth Krishnamurthy

ಕನ್ನಡ, ಸಂಕೇತಿ, ಇಂಗ್ಲೀಷು, ತಮಿಳು ಭಾಷೆಗಳಲ್ಲಿ ಬರೆಯುವ ಹವ್ಯಾಸ… ಸಂಗೀತ, ಸಾಹಿತ್ಯ, ಭಾಷಾ ಶಾಸ್ತ್ರಗಳಲ್ಲಿ ವಿಶೇಷ ಆಸಕ್ತಿ

ನಿಮ್ಮ ಟಿಪ್ಪಣಿ ಬರೆಯಿರಿ

Design a site like this with WordPress.com
ಪ್ರಾರಂಭಿಸಿ